ಶ್ರೀಜಯಾ ನಾಯರ್ ಒಬ್ಬ ಭಾರತೀಯ ನಟಿ ಮತ್ತು ನೃತ್ಯಗಾರ್ತಿ. ಅವರು ೧೯೯೦ ರ ದಶಕದ ಉದ್ದಕ್ಕೂ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿ ಮದುವೆಯ ನಂತರ ನಿವೃತ್ತರಾದರು. ೨೦೧೪ ರಲ್ಲಿ ಪುನಃ ನಟನೆಗೆ ಮರಳಿದರು. ಅವರು ವೃತ್ತಿಪರ ನೃತ್ಯಗಾರ್ತಿ ಮತ್ತು ಬೆಂಗಳೂರಿನಲ್ಲಿ ಶ್ರೀಜಯಾ ಸ್ಕೂಲ್ ಆಫ್ ಕ್ಲಾಸಿಕಲ್ ಡ್ಯಾನ್ಸ್ ಎಂಬ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ. == ಆರಂಭಿಕ ಜೀವನ == ಶ್ರೀಜಯಾ ಭಾರತದ ಕೇರಳದ ಕೋತಮಂಗಲಂ ಮೂಲದವರು. ಅವರು ಐದನೇ ವಯಸ್ಸಿನಿಂದ ಕಲಾಮಂಡಲಂ ಸುಮತಿ ಮತ್ತು ಕಲಾಮಂಡಲಂ ಸರಸ್ವತಿ ಅವರಲ್ಲಿ ನೃತ್ಯ ಕಲಿಯಲು ಪ್ರಾರಂಭಿಸಿದರು. ಅವರು ಕೇರಳ ಕಲಾಮಂಡಲಂ‌ನಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ ಮತ್ತು ಕೂಚಿಪುಡಿ ತರಗತಿಗಳನ್ನು ತೆಗೆದುಕೊಂಡು ನಂತರ ಅವರ ಶಿಕ್ಷಕಿ ಚಿತ್ರಾ ಚಂದ್ರಶೇಖರ್ ದಾಶರಥಿ ಅವರಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. == ವೃತ್ತಿ == ಇವರು ೧೯೯೨ ರಲ್ಲಿ ಮಲಯಾಳಂ ನಾಟಕವಾದ ಕಮಲದಲಂನಲ್ಲಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ೧೯೯೮ ರಲ್ಲಿ, ಹಾಸ್ಯ ನಾಟಕ ಸಮ್ಮರ್ ಇನ್ ಬೆಥ್ ಲೆಹೆಮ್ ನಲ್ಲಿ ನಟಿಸಿದರು. ಮದುವೆಯ ನಂತರ ಸ್ವಲ್ಪ ವಿರಾಮ ತೆಗೆದುಕೊಂಡರು. == ವೈಯಕ್ತಿಕ ಜೀವನ == ಶ್ರೀಜಯಾ ಅವರು ಉದ್ಯಮಿ ಮದನ್ ನಾಯರ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಮೈಥಿಲಿ ಎಂಬ ಮಗಳಿದ್ದಾಳೆ. ಮದುವೆಯ ನಂತರ ಅವರು ಕೋಝಿಕ್ಕೋಡ್‌ಗೆ, ಬೆಂಗಳೂರು ಮತ್ತು ಕೆನಡಾಕ್ಕೆ ತೆರಳಿದರು. ನಂತರ ಬೆಂಗಳೂರಿಗೆ ಹಿಂತಿರುಗಿ ನೆಲೆಸಿದರು. ಶ್ರೀಜಯಾ ಅವರು ಬೆಂಗಳೂರಿನಲ್ಲಿ ಶ್ರೀಜಯಾ ಸ್ಕೂಲ್ ಆಫ್ ಕ್ಲಾಸಿಕಲ್ ಡ್ಯಾನ್ಸ್ ಹೆಸರಿನ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ, ಇದು ನಗರದಲ್ಲಿ ೫ ಶಾಖೆಗಳನ್ನು ಹೊಂದಿದೆ ಮತ್ತು ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. == ಚಿತ್ರಕಥೆ == === ಚಲನಚಿತ್ರಗಳು === === ದೂರದರ್ಶನ === == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ನಾಯರ್